D C Gowrishankar - JDS icon

7.0 by Vivaan Web Technologies


Mar 31, 2018

About D C Gowrishankar - JDS

Official App of D.C Gowrishankar, J.D.S Tumkur Rural Constituency

ಶ್ರೀ ಡಿ.ಸಿ. ಗೌರಿಶಂಕರ್ ರವರು ಬೈರ ನಾಯಕನ ಹಳ್ಳಿಯಲ್ಲಿ ಕೃಷಿ, ವ್ಯಾಪಾರದೊಂದಿಗೆ ರಾಜಕೀಯ, ಧಾರ್ಮಿಕ ಸೇವೆಯಿಂದ ಚಿರಪರಿಚಿತವಾದ ಪ್ರತಿಷ್ಠಿತ ಮಾಜಿ ಸಚಿವರಾದ ಸಿ. ಚನ್ನಿಗಪ್ಪರವರ ಕುಟುಂಬದಲ್ಲಿ ಜನಿಸಿದ ಡಿ.ಸಿ. ಗೌರಿಶಂಕರ್ (ಶಂಕರಣ್ಣ). ಇವರು ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣವನ್ನು ಮೈಗೂಡಿಸಿಕೊಂಡವರು.

ಬಿ.ಎಸ್ಸಿ., ಪದವೀಧರರಾದ ಅವರು ಕ್ರಿಯಾಶೀಲ ಯುವ ಉತ್ಸಾಹಿ ನಾಯಕರು.

2004 ರಲ್ಲಿ ನಡೆದ ತ್ಯಾಮಗೊಂಡಲ ಜಿಲ್ಲಾಪಂಚಾಯತ್ ಚುನಾವಣೆಯಲ್ಲಿ ಭಾರಿಅಂತರದಲ್ಲಿ ಚನಿಗಪ್ಪರವರ ಕುಟುಂಬದಲ್ಲಿ ಏರಡನೆ ತಲೆಮಾರಿನವರಾಗಿ ಐತಿಹಾಸಿಕಗೆಲುವು ಸಾಧಿಸಿದ ಶ್ರೀ ಡಿ.ಸಿ. ಗೌರಿಶಂಕರ್ ರವರು ಜಿಲ್ಲಾಪಂಚಾಯತ್ ಸದಸ್ಯರಾಗಿ ಕೇವಲ ಮೂರು ವರ್ಷದ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ, ಜನರಸಮಸ್ಯೆಗಳನ್ನು ಪರಿಹರಿಸುವಲ್ಲಿ ಅವರು ಮಾಡಿದ ಕೆಲಸಗಳನ್ನು ಮಾದರಿಯಾಗಿವೆ.

2008 ರಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಮೊಟ್ಟ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭಾ ಆಯ್ಕೆ. ಶ್ರೀಯುತರು ಜನತಾದಳ (ಜಾತ್ಯತೀತ) ಪಕ್ಷದ ಮಧುಗಿರಿ ಕ್ಷೇತ್ರದ ಶಾಸಕರಾಗಿ ರಾಜಕಾರಣದಲ್ಲಿಯೂ ಮೇರು ವ್ಯಕ್ತಿತ್ವದ ಸಮರ್ಥ ನಾಯಕರಾಗಿದ್ದಾರೆ. 2009 ರಲ್ಲಿ ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ನಿಗಮವನ್ನು ಉನ್ನತವಾದ ಮಟ್ಟದಲ್ಲಿ ಅಭಿವೃದ್ಧಿ ಮಾಡಿರುತ್ತಾರೆ.

“ಗ್ರೇಟರ್ ಪೀಣ್ಯ” ಎಂದು ಸುಮಾರು 250 ಏಕ್ಕರೆ ಭೂಮಿಯಲ್ಲಿ ಹೊಸ ಕೈಗಾರಿಕೆ ಜಾರಿಗೆ ತಂದು ನಿಗಮವನ್ನು ಉತ್ತಮ ಮಟ್ಟಕ್ಕೆ ಮತ್ತು ಲಾಭದಾಯಕವಾಗಿ ಮಾಡಿದ ಕೆಲಸಗಳನ್ನು ಮಾದರಿಯಾಗಿವೆ.

2013 ರಲ್ಲಿ ತುಮಕೂರು ಗ್ರಾಮಾಂತರದಲ್ಲಿ ನಡೆದ 2ನೇ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕೇವಲ 750 ಅಲ್ಪ ಮತಗಳಿಂದ ಪರಾಭವ ಹೊಂದಿದ್ದರೂ ಕ್ಷೇತ್ರ ಬಿಟ್ಟು ಹೋಗದೆ, ನಿರಂತರವಾಗಿ ಜನರ ನಡುವೆ ಇದ್ದು ಅವರಸಂಕಷ್ಟಗಳಿಗೆ ಸ್ಪಂದಿಸುತ್ತಾ ಆ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸದಾಸನ್ನದ್ಧರಾಗುವ ಮನೋಭಾವದ ಶ್ರೀ ಡಿ.ಸಿ. ಗೌರಿಶಂಕರ್ ಅವರು ಜನಾನುರಾಗಿನಾಯಕರಾಗಿದ್ದಾರೆ. ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ ಹಾಗೂ ವಿಶಾಲಮನೋಭಾವಗಳನ್ನು ಮೈಗೂಡಿಸಿಕೊಂಡಿರುವ ಶ್ರೀಯುತರು ಜನತಾದಳ(ಜಾತ್ಯತೀತ) ಪಕ್ಷದ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ನಾಯಕರಾಗಿ ರಾಜಕಾರಣದಲ್ಲಿಯೂ ಮೇರು ವ್ಯಕ್ತಿತ್ವದ ಸಮರ್ಥನಾಯಕರಾಗಿದ್ದಾರೆ ಮತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಅರ್ಥಪೂರ್ಣ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀ ಡಿ.ಸಿ. ಗೌರಿಶಂಕರ್ ಅವರು ಹೋರಾಟಗಾರರಾಗಿಯೂ ಚಿರಪರಿಚಿತರು. ಈ ಭಾಗದಲ್ಲಿ ಜನಾಂದೋಲನವಾಗಿ ರೂಪಗೊಂಡ ಹೇಮಾವತಿ ನದಿ ನೀರು ಅಂಚಿಕೆ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ರೈತರ ಸಾಲ ಮನ್ನಾ, ಬೆಳೆವಿಮೆ, ಬೆಂಬಲ ಬೆಲೆ ಮುಂತಾದ ಬೇಡಿಕೆ ಗಳಿಗಾಗಿ ನಡೆದ ಹಲವು ಹೋರಾಟಗಳಿಗೆಮತ್ತು ಯುವಕರು, ಮಹಿಳೆಯರು ಮತ್ತು ನಾಗರಿಕರ ಹೋರಾಟಗಳಿಗೆ ನಾಯಕತ್ವನೀಡುತ್ತಾ ಬಂದಿದ್ದಾರೆ. ರೈತ ಸಮ್ಮೇಳನ ಮತ್ತು ಕಾರ್ಮಿಕರ ಸಮ್ಮೇಳನಗಳುಯಶಸ್ವಿಗೆ ಕಾರ್ಯನಿರ್ವಹಿಸಿದ್ದಾರೆ.

ನಡೆ ಮತ್ತು ನುಡಿ ಎರಡರಲ್ಲೂ ಸರಳತನ ಮೈಗೂಡಿಸಿಕೊಂಡ ಇವರು ಜನರ ಬಳಿಗೆ ಹೆಜ್ಜೆ ಹಾಕಿದವರು. ಅಷ್ಟೇ ಅಲ್ಲ, ಜನರ ಬಳಿಗೆ ಆಡಳಿತ ಯಂತ್ರವನ್ನೇ ಕರೆದೊಯ್ದವರು.ಜನರ ನಡುವೆ ಕುಳಿತು ಅವರ ದುಃಖ ದುಮ್ಮಾನಗಳನ್ನು ಆಲಿಸಿದವರು. ಈ ಎಲ್ಲ ಕಾರಣಗಳಿಂದಾಗಿಯೇ ಶ್ರೀ ಡಿ.ಸಿ. ಗೌರಿಶಂಕರ್ ಅವರು ಪ್ರತಿಯೊಬ್ಬರ ಮನಸ್ಸಿನಲ್ಲಿ ನೆಲೆ ನಿಂತಿದ್ದಾರೆ. ಹಾಗಾಗಿಯೇ ಇವರು ನಮ್ಮ ಶಂಕರಣ್ಣ…

ಬಂಧುಗಳೇ… ಮುಂಬರುವ 2018 ರಲ್ಲಿ ನಡೆಯುವ ತುಮಕೂರು ಗ್ರಾಮಾಂತರ ವಿಧಾನಸಭಾ ಚುನಾವಣೆಯಲ್ಲಿ ನಮ್ಮೆಲ್ಲರ ಅಭಿಮಾನದ ನಾಯಕರಾದ ಶ್ರೀ ಡಿ.ಸಿ. ಗೌರಿಶಂಕರ್ ಅವರನ್ನು ಆಯ್ಕೆ ಮಾಡುವ ಮೂಲಕ ಸುಂದರ ಸಮೃದ್ಧ ಸಮಾನತೆಯ ನಾಡು ಕಟ್ಟಲು ಕೈಜೋಡಿಸಿ..

What's New in the Latest Version 7.0

Last updated on Mar 31, 2018

ತುಮಕೂರು ಜಿಲ್ಲೆಯ ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಸಮಸ್ತ ರೈತರಿಗೆ, ಮಹಿಳೆಯರಿಗೆ, ಕಾರ್ಮಿಕರು, ಹಾಗೂ ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರೀಕರಲ್ಲಿ ಈಮೂಲಕ ತಮ್ಮಲ್ಲಿ ಕೋರಿಕೋಳ್ಳುವುದೆನೆಂರೆ ತಾವುಗಳು 2018ರ ತುಮಕೂರು ಗ್ರಾಮಾಂತರ ಕ್ಷೇತ್ರದ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳಿಂದ ವಿಜಯಶಾಲಿಯನ್ನಾಗಿ ಮಾಡಬೇಕೆಂದು ತಮ್ಮಲ್ಲಿ ಈ ಮೂಲಕ ಪ್ರಾರ್ಥಿಸಿಕೊಳ್ಳುತ್ತಿದ್ದೆನೆ.

Translation Loading...

Additional APP Information

Latest Version

Request D C Gowrishankar - JDS Update 7.0

Uploaded by

Kaung Satt

Requires Android

Android 4.1+

Show More

D C Gowrishankar - JDS Screenshots

Comment Loading...
Languages
Searching...
Subscribe to APKPure
Be the first to get access to the early release, news, and guides of the best Android games and apps.
No thanks
Sign Up
Subscribed Successfully!
You're now subscribed to APKPure.
Subscribe to APKPure
Be the first to get access to the early release, news, and guides of the best Android games and apps.
No thanks
Sign Up
Success!
You're now subscribed to our newsletter.